ಕಾರ್ಮಿಕ ನ್ಯಾಯಾಲಯದಲ್ಲಿ ಗೆಲುವು: 3 ವರ್ಷದ ಬಳಿಕ ಮತ್ತೆ ಕೆಲಸ ಪಡೆದ ಎಚ್ ಐವಿ ಪೀಡಿತ ಮಹಿಳೆ

ಎಚ್ ಐವಿ ಸೋಂಕಿತೆ ಎಂದು ಕೆಲಸದಿಂದ ತೆಗೆದುಹಾಕಲಾಗಿದ್ದ ಮಹಿಳೆಯೊಬ್ಬರಿಗೆ ಮೂರು ವರ್ಷದ ನಂತರ ಮತ್ತೆ ಕೆಲಸ ದೊರಕಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುಣೆ: ಎಚ್ ಐವಿ ಸೋಂಕಿತೆ ಎಂದು ಕೆಲಸದಿಂದ ತೆಗೆದುಹಾಕಲಾಗಿದ್ದ ಮಹಿಳೆಯೊಬ್ಬರಿಗೆ ಮೂರು ವರ್ಷದ ನಂತರ ಮತ್ತೆ ಕೆಲಸ  ದೊರಕಿದೆ. ಬಾಕಿ ಇರುವ ಎಲ್ಲಾ  ವೇತನವನ್ನು ಮರಳಿಸಿ ಮತ್ತೆ  ಕೆಲಸ ನೀಡುವಂತೆ  ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಪುಣೆ ಮೂಲದ ಮಹಿಳೆಗೆ ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದೆ.

ಕಾರ್ಮಿಕ ನ್ಯಾಯಾಲಯದ  ಮುಖ್ಯಾಧಿಕಾರಿ ಕಲ್ಪನಾ ಪಠಣ್ ಗರೆ  ಅಕ್ಟೋಬರ್ ತಿಂಗಳಲ್ಲಿ ಈ ಆದೇಶ ಹೊರಡಿಸಿದ್ದು, ಬಾಕಿ ಬರಬೇಕಾಗಿದ್ದ ಎಲ್ಲಾ ವೇತನವನ್ನು ಮರಳಿಸಿ ಆಕೆಯನ್ನು ಮೂರು ವರ್ಷದ ಹಿಂದೆ ಯಾವ ಕೆಲಸ ನೀಡಲಾಗಿತ್ತೋ ಅದೇ ಕೆಲಸದಲ್ಲಿ ಮುಂದುವರೆಸುವಂತೆ  ಔಷಧಿಯೋತ್ಪನ್ನ ಸಂಸ್ಥೆಗೆ ಸೂಚನೆ ನೀಡಿದ್ದಾರೆ.

ವಕೀಲ ವಿಶಾಲ್  ಜಾದವ್ ಮೂಲಕ ಆ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ವೈದ್ಯಕೀಯ ಸವಲತ್ತು ಪಡೆಯಲು  ದಾಖಲೆಗಳನ್ನು ಸಲ್ಲಿಸಿದ ಬಳಿಕ 2015ರಲ್ಲಿ ತಮ್ಮಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿತ್ತು ಎಂದು ದೂರಿನಲ್ಲಿ ಆಕೆ ಹೇಳಿದ್ದರು.

ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುವುದಾಗಿ ಹೇಳಿದ್ದರೂ ಕೂಡಾ ಎಚ್ ಐವಿ ಪೀಡಿತೆ ಎಂದು ಗೊತ್ತಾದ ಬಳಿಕ ಮಾನವ ಸಂಪನ್ಮೂಲ ಅಧಿಕಾರಿಗಳು ಬಲವಂತದಿಂದ ಕೆಲಸಕ್ಕೆ ರಾಜೀನಾಮೆ ಪಡೆದಿದ್ದಾರೆ. ವಿಧವೆಯಾಗಿರುವ ತನ್ನಗೆ ಉದ್ಯೋಗದ ಅಗತ್ಯವಿರುವುದಾಗಿ  ನ್ಯಾಯಾಲಯಕ್ಕೆ ಮಹಿಳೆ ಮನವಿ ಮಾಡಿಕೊಂಡಿದ್ದರು.

ಎಚ್ ಐವಿ ಪೀಡಿತೆ ಎಂಬ ಉದ್ದೇಶಕ್ಕೆ  ಆಕೆಯಿಂದ ಬಲವಂತವಾಗಿ ರಾಜೀನಾಮೆ ಪಡೆದು ಕೆಲಸದಿಂದ ತೆಗೆದುಹಾಕಲಿದೆ ಎಂದು ಮಹಿಳೆ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.  ಗ್ರಾಜ್ಯುಯೇಟಿ, ಬೋನಸ್, ರಜೆ ಮತ್ತಿತರ ಸವಲತ್ತು ನೀಡಿದ್ದರೂ ಆಕೆಯ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಕಂಪನಿ ಹೇಳಿತ್ತು.

ರಾಜೀನಾಮೆ ಪಡೆದಿಲ್ಲ, ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅಭಿಪ್ರಾಯಪಟ್ಟ  ಪಠಣ್ ಗರೆ,  ಎಚ್ ಐವಿ ಪೀಡಿತೆ ಎಂದು ಈ ರೀತಿಯಲ್ಲಿ ಕಂಪನಿ ನಡೆದುಕೊಳ್ಳುವುದಿಲ್ಲ ಸರಿಯಿಲ್ಲ. ಆ ಮಹಿಳೆಗೆ ಮತ್ತೆ ಉದ್ಯೋಗ ನೀಡಿ, ಬಾಕಿ ಇರುವ ಎಲ್ಲಾ ವೇತನ ಪಾವತಿಸುವಂತೆ ಆದೇಶ  ಪ್ರಕಟಿಸಿದ್ದಾರೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com